ಶ್ರೀಮದ್ ಭಗವದ್ಗೀತೆ ಯಲ್ಲಿ ಭಗವಾನ್ ಶ್ರೀ ಕೃಷ್ಣನು ಅರ್ಜುನನಿಗೆ ಹೀಗೆ ಹೇಳಿ್ದ್ದಾರೆ –
“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮನಂ ಸ್ರಜಾಮ್ಯಹಮ್ ॥4-7॥
ಪರಿತ್ರಾಣಾಯ ಸಾಧುನಾಮ್ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ ॥೪–೮॥”
ಅರ್ಥ:-
ಮೇಲಿನ ಶ್ಲೋಕದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ, “ದೇವರ ಭೂಮಿಯಾದ ಭಾರತದಲ್ಲಿ ಧರ್ಮದ ನಷ್ಟವುಂಟಾದಾಗ, ಅಧರ್ಮವು ಹೆಚ್ಚಾದಾಗ , ಆಗ ಮಾತ್ರ ನಾನು ಅವತರಿಸುತ್ತೇನೆ. ನಾನು ಸಜ್ಜನರನ್ನು ಮತ್ತು ಸಾಧು ಸಂತರನ್ನು ರಕ್ಷಿಸಲು ಮತ್ತು ದುಷ್ಟರನ್ನು ಮತ್ತು ಪಾಪಿಗಳನ್ನು ನಾಶಮಾಡಲು ಮತ್ತು ಧರ್ಮವನ್ನು ಸ್ಥಾಪಿಸಲು ಮತ್ತು ಭೂಲೋಕದ ಎಲ್ಲಾ ನಿವಾಸಿಗಳ ಒಳಿತಿಗಾಗಿ, ಪ್ರತಿ ಯುಗದಲ್ಲಿಯೂ ಮತ್ತೆ ಮತ್ತೆ ಅವತರಿಸುತ್ತೇನೆ.
ಗೋಸ್ವಾಮಿ ತುಳಸಿದಾಸರು ತಮ್ಮ ಗ್ರಂಥವಾದ “ರಾಮಚರಿತ ಮಾನಸ” ದಲ್ಲಿ ಹೀಗೆ ಹೇಳಿದ್ದಾರೆ–
“ಜಬ್ ಜಬ್ ಹೋಈ ಧರ್ಮ ಕಿ ಹಾನಿ,
ಬಾಡಹಿ ಅಸುರ ಅಧಮ ಅಭಿಮಾನಿ |
ತಬ್ ತಬ್ ಪ್ರಭು ಧರಿ ವಿವಿಧ್ ಸರೀರಾ,
ಹರಹಿ ದಯಾನಿಧಿ ಸಜ್ಜನ್ ಪೀರಾ” ||
ಅರ್ಥ :-
ಈ ಸಾಲುಗಳಲ್ಲಿ ಗೋಸ್ವಾಮಿ ತುಳಸೀದಾಸರು ಹೀಗೆ ಹೇಳಿದ್ದಾರೆ. ಏಂದು ಧರ್ಮದ ನಷ್ಟ, ಅಧರ್ಮ, ದೌರ್ಜನ್ಯ, ಅಸುರನ ದುರ್ನಡತೆ, ದುಷ್ಟರು ಹೆಚ್ಚಾಗುತ್ತಾರೋ , ಆಗ ಭಗವಂತನಾದ ವಿಷ್ಣುವು ವಿಭಿನ್ನ ದೇಹಗಳನ್ನು ಅಂದರೆ ಅವತಾರಗಳನ್ನು ತೆಗೆದುಕೊಳ್ಳುತ್ತಾನೆ. ರಾಕ್ಷಸರನ್ನು ಸಂಹರಿಸಿ, ಸಾಧು ಸಂತರನ್ನು ಮನುಷ್ಯರನ್ನು ಮತ್ತು ದೇವತೆಗಳನ್ನು ರಕ್ಷಿಸುತ್ತಾರೆ.
ಭಗವಂತನಾದ ವಿಷ್ಣುವು ಪ್ರತಿಯೊಂದು ಯುಗದಲ್ಲೂ ವಿಭಿನ್ನ ಅವತಾರಗಳನ್ನು ತೆಗೆದುಕೊಂಡಿದ್ದಾನೆ . ಸತ್ಯಯುಗದಲ್ಲಿ ಭಗವಂತನಾದ ನಾರಾಯಣನು ಐದು ಅವತಾರಗಳನ್ನು ತೆಗೆದುಕೊಂಡನು – ಮತ್ಸ್ಯ ಅವತಾರ, ಆಮೆ/ಕೂರ್ಮ ಅವತಾರ, ವರಾಹ/ಹಂದಿ ಅವತಾರ, ನರಸಿಂಹ ಅವತಾರ ಮತ್ತು ವಾಮನ ಅವತಾರ. ಭಗವಂತನಾದ ನಾರಾಯಣನು ತ್ರೇತಾಯುಗದಲ್ಲಿ ಎರಡು ಅವತಾರಗಳನ್ನು ತೆಗೆದುಕೊಂಡಿದ್ದಾನೆ – ಶ್ರೀ ರಾಮನ ಅವತಾರ ಮತ್ತು ಭಗವಾನ್ ಪರಶುರಾಮ/ಭೃಗುಪತಿ ಅವತಾರ. ಭಗವಂತನಾದ ನಾರಾಯಣನು ದ್ವಾಪರ ಯುಗದಲ್ಲಿ ಎರಡು ಅವತಾರಗಳನ್ನು ತೆಗೆದುಕೊಂಡನು – ಕೃಷ್ಣ ಅವತಾರ ಮತ್ತು ಹಲಧರ /ಬಲರಾಮ್ ಅವತಾರ.
ಈ ಕಲಿಯುಗದಲ್ಲಿ ಭಗವಂತನಾದ ನಾರಾಯಣನು ಒಟ್ಟು ಮೂರು ಅವತಾರಗಳನ್ನು ತೆಗೆದುಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಅವುಗಳಲ್ಲಿ ಎರಡು ಮಾತ್ರ ದಶಾವತಾರ ಸ್ತೋತ್ರದಲ್ಲಿ ವಿವರಿಸಲಾಗಿದೆ. ಕವಿ ಜಯದೇವ್ ಮಹಾರಾಜರವರ ‘ಗೀತ್ ಗೋವಿಂದ್‘ ಮತ್ತು ‘ಭಗವತ್ ಪುರಾಣ‘ ಮುಂತಾದ ಅನೇಕ ಗ್ರಂಥಗಳಲ್ಲಿ ದಶಾವತಾರದ ಬಗೆಗಿನ ವಿವರಣೆ ಕಂಡುಬರುತ್ತದೆ. ಆ ದಶಾವತಾರಗಳ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಕೆಳಗೆ ನೀಡಲಾಗಿದೆ:-
- ಮತ್ಸ್ಯ ಅವತಾರ: –
ಶ್ರೀಮದ್ ಭಾಗವತ್ ಮಹಾಪುರಾಣದಲ್ಲಿ ಮಹರ್ಷಿ ವೇದ ವ್ಯಾಸ ಮಹಾರಾಜರು ದೇವರ ಮತ್ಸ್ಯ ಅವತಾರದ ಬಗ್ಗೆ ಬರೆಯುತ್ತಾರೆ:-
“ಆಸೀದತಿಕಲ್ಪಾನ್ತೇ ಬ್ರಹ್ಮೋ ನೈಮಿತ್ತಿಕೋ ಲಯಃ ।
ಸಮುದ್ರೋಪ್ಪಲುತಾಸ್ತ್ರ ಲೋಕ ಭೂರದಯೋ ನೃಪ ।
ಕಾಲೇನಾಗತ್ ನಿದ್ರಸ್ಯ ಲೋಹ: ಶಿಷ್ಯಶೋರ್ಬಲಿ.”
ಸುಖತೋ ನಿಃಶ್ರಿತಾನ್ ವೇದಾತ್ ಹಯಗ್ರೀವೋನ್ಧನ್ತಿಕೇನ್ಧರಾತ್ ।
ಜ್ನಾಥ್ವಾ ತಹದನ್ಬೇನ್ದ್ರಸ್ಯ ಹಯಗ್ರೀವಸ್ಯ ಚೇಷ್ಟಿತಮ್ ।
ದಧಾರ್ ಶಫರೀರೂಪಂ ಭಗವಾನ್ ಹರಿರೀಶ್ವರ ।
ಅತಿತಪ್ರಲಾಯಪಾಯ ಉತ್ಥಿತಾಯ ಸ ಬೇಧಸೇ ।
ಹತ್ವಾಸುರಂ ಹಯಗ್ರೀವಂ ವೇದಾನ್ ಪ್ರತ್ಯಹರನ್ಧಾರೀ ।“
– ಶ್ರೀಮದ್ ಭಾಗವತ್ ಮಹಾಪುರಾಣ – ಮತ್ಸ್ಯಾವತಾರಕಥಾ – ಅಷ್ಟಮ: ಸ್ಕಂಧ –ಚತುರ್ವಿಂಶೋ‘ಧ್ಯಾಯ:
ಶ್ರೀ ಜೈದೇವ್ ಮಹಾರಾಜರು ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ಮತ್ಸ್ಯ ಅವತಾರದ ಬಗ್ಗೆ ಬರೆಯುತ್ತಾರೆ:-
“ಪ್ರಲಯ ಪಯೋಧಿ–ಜಲೇ ಧೃತವಾನ್ ಅಸಿ ವೇದಮ್
ವಿಹಿತ ವಹಿತ್ರ–ಚರಿತ್ರಮ್ ಅಖೇದಮ್
ಕೇಶವ ಧೃತ–ಮೀನ–ಶರೀರ, ಜಯ ಜಗದೀಶ ಹರೇ |”
ಅರ್ಥ :-
ಮೇಲಿನ ಎರಡು ಶ್ಲೋಕಗಳಲ್ಲಿನ ಅರ್ಥ ಒಂದೇ ಯಾಗಿದೆ ಭಗವಂತನು ಮೀನಿನ ರೂಪದ ಅವತಾರದ ಬಗ್ಗೆ ತಿಳಿಸಲಾಗಿದೆ. ಭಗವಾನ್ ವಿಷ್ಣುವು ಮೀನಿನ ರೂಪದ ಅವತಾರ ಧರಿಸಿ ಮನು ಮಹಾರಾಜನ ದೋಣಿಯನ್ನು ನಡೆಸುವ ಮೂಲಕ ಎಲ್ಲಾ ಜೀವಿಗಳನ್ನು ವಿನಾಶಕಾರಿ ಪ್ರಳಯದಿಂದ ರಕ್ಷಿಸಿದನು ಮತ್ತು ಧರ್ಮ ಸಂಸ್ಥಾಪನೆಯ ಕಾರ್ಯವನ್ನು ಮಾಡಿದರು.
ಹಯಗ್ರೀವ ಎಂಬ ರಾಕ್ಷಸನು ವೇದಗಳನ್ನು ಕದ್ದು ಸಮುದ್ರದ ಆಳದಲ್ಲಿ ಅಡಗಿಕೊಂಡಾಗ. ಭಗವಾನ್ ವಿಷ್ಣುವು ಮತ್ಸ್ಯನಾಗಿ ಅವತರಿಸಿದನು ಮತ್ತು ಹಯಗ್ರೀವನನ್ನು ಕೊಲ್ಲಲು ಭೀಕರ ಯುದ್ಧವನ್ನು ಮಾಡಿದನು ಮತ್ತು ವೇದಗಳನ್ನು ರಕ್ಷಿಸಿದ ನಂತರ ಅವನನ್ನು ಬ್ರಹ್ಮ ದೇವರಿಗೆ ಒಪ್ಪಿಸಿದನು. ಏಳು ಋಷಿಗಳನ್ನು ಸಹ ವಿಷ್ಣುವು ಮತ್ಸ್ಯ ರೂಪದಲ್ಲಿ ರಕ್ಷಿಸಿದನು. ಇದು ಭಗವಂತನ ಸ್ವಯಂ–ಭೂ ಅವತಾರ.
2. ಆಮೆ / ಕೂರ್ಮ ಅವತಾರ: –
ಶ್ರೀಮದ್ ಭಾಗವತ್ ಮಹಾಪುರಾಣದಲ್ಲಿ, ಮಹರ್ಷಿ ವೇದವ್ಯಾಸ್ ಮಹಾರಾಜರು ಕಚ್ಛಪ ಅವತಾರದ ಬಗ್ಗೆ ಬರೆದಿದ್ದಾರೆ: –
“ಪೃಷ್ಟೇ ಭ್ರಾಮ್ಯದಮಂದಮಂದರಗಿರಿ– ಗ್ರಾವಗ್ರಕಣ್ವಯನಾನಿದ್ರಾಲೋ
ಕಾಮಠಕೃತೇರ್ಭಾಗವತ್: ಶ್ವಾಸನಿಲಾ: ಪಾನ್ತು ವಃ ।
ಯತ್ಸಂಸ್ಕಾರ ಕಲಾನುವರ್ತನ್ ಬಾಷಾದ ಬೆಲಾ ನಿಭೇನಯಸಾಂ
ಜತಾ ಯಾತ್ಮತಂದ್ರಿತಂ ಜಲನಿಧೇರ್ನಾದ್ಯಪಿ ವಿಶ್ರಮ್ಯತಿ.”
–ಶ್ರೀಮದ್ ಭಾಗವತ ಪುರಾಣಂ / ಸ್ಕಂಧ: 12 / ಅಧ್ಯಾಯ: 13
ಅರ್ಥ :-
ಭಗವಾನ್ ವಿಷ್ಣುವು ಕೂರ್ಮದ ಅಂದರೆ ಆಮೆ ರೂಪದಲ್ಲಿ ತನ್ನನ್ನು ಕ್ಷೀರಸಾಗರದ ಕೆಳಭಾಗದಲ್ಲಿ ಇರಿಸಿದನು ಮತ್ತು ಸಮುದ್ರದ ಮಂಥನಕ್ಕಾಗಿ ತನ್ನ ಬೆನ್ನನ್ನು ಮಂದಾರಚಲ ಪರ್ವತಕ್ಕೆ ಆಧಾರವಾಗಿಸಿದನು.ಇದು ಭಗವಂತನ ಸ್ವಯಂ–ಭೂ ಅವತಾರ.
ದೇವತೆಗಳು ರಾಕ್ಷಸರಿಂದ ತಮ್ಮ ಅಧಿಕಾರವನ್ನುವಶಪಡಿಸಿಕೊಳ್ಳುವ ಅಪಾಯದಲ್ಲಿದ್ದಾಗ, ಭಗವಾನ್ ವಿಷ್ಣುವು ಅವರನ್ನು ಶಕ್ತಿಯುತ ಮತ್ತು ಅಮರರನ್ನಾಗಿ ಮಾಡುವ ಅಮೃತವನ್ನು ಪಡೆಯಲು ಸಾಗರವನ್ನು ಮಂಥನ ಮಾಡಲು ಸೂಚಿಸಿದನು. ಸಾಗರ ಮಂಥನದಲ್ಲಿ ರಾಕ್ಷಸರ ಸಹಾಯವನ್ನು ಪಡೆಯಲು, ದೇವತೆಗಳು ರಾಕ್ಷಸರೊಂದಿಗೆ ಒಪ್ಪಂದವನ್ನು ಮಾಡಿಕೊಂಡರು ಮತ್ತು ಅವರು ಎಲ್ಲಾ ವಸ್ತುಗಳನ್ನು ಪಡೆಯಲು ಸಾಗರವನ್ನು ಮಂಥನ ಮಾಡಿದರು.
ಶ್ರೀ ಜೈದೇವ್ ಮಹಾರಾಜರು ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ಕಚ್ಛಪ ಅವತಾರದ ಬಗ್ಗೆ ಹೀಗೆ ಬರೆದಿದ್ದಾರೆ:
“ಕ್ಷಿತಿರತಿ ವಿಪುಲತರೇ ತವ ತಿಷ್ಠತಿ ಪೃಷ್ಠೇ
ಧರಣಿ– ಧಾರಣ–ಕಿಣ ಚಕ್ರ–ಗರಿಷ್ಠೇ
ಕೇಶವ ಧೃತ–ಕಚ್ಛಪ ರೂಪ ಜಯ ಜಗದೀಶ ಹರೇ “
ಅಂದರೆ, ಭೂಮಿಯ ಮೇಲೆ ಕೇವಲ ಕತ್ತಲೆ ಇದ್ದಾಗ, ಬೆಳಕನ್ನು ತರಲು ಭಗವಾನ್ ವಿಷ್ಣುವು ಆಮೆಯಾಗಿ ಅವತರಿಸಿದನು ಮತ್ತು ಭೂಮಿಯನ್ನು ತನ್ನ ಬೆನ್ನಿನ ಮೇಲೆ ಎತ್ತಿ ಸೂರ್ಯನ ಕಕ್ಷೆಯಲ್ಲಿ ಇರಿಸಿದನು. ಇದು ಭಗವಂತನ ಸ್ವಯಂ–ಭೂ ಅವತಾರ.
- ವರಾಹ ಅವತಾರ: –
ಶ್ರೀಮದ್ ಭಾಗವತ ಮಹಾಪುರಾಣದಲ್ಲಿ, ಮಹರ್ಷಿ ವೇದ ವ್ಯಾಸ ಮಹಾರಾಜರು ವರಾಹ ಅವತಾರದ ಬಗ್ಗೆ ಬರೆದಿದ್ದಾರೆ: –
“ತಮಾಲನೀಲ ಸೀತಾದಂತಕೊಟ್ಯಾ
ಕ್ಷ್ಮಮುಕ್ಷಿಪಂಥ ಗಜಲೀಲಯಂಗ ॥
ಪ್ರಜ್ಞಾಯ ಬಂಧಾಜಲಯೋಂ ಧನುವಾಕೈ–
ರ್ಬಿರಂಚಿ ಮುಖ್ಯಾ ಉಪತಸ್ತುರೀಶಮ್ ।“
ಕವಿ ಜೈದೇವ್ ಮಹಾರಾಜ್ ಅವರು ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ವರಾಹ ಅವತಾರದ ಬಗ್ಗೆ ಬರೆಯುತ್ತಾರೆ: –
“ವಸತಿ ದಶನ ಶಿಖರೇ ಧರಣಿ ತವ ಲಗ್ನಾ
ಶಶಿನಿ ಕಳಂಕ ಕಲೆವ್ ನಿಮಗ್ನ
ಕೇಶವ ಧೃತ ಶೂಕರ ರೂಪ ,
ಜಯ ಜಗದೀಶ್ ಹರೇ ||”
ಅರ್ಥ:-
ಹಿರಣ್ಯಾಕ್ಷ ಎಂಬ ರಾಕ್ಷಸನು ಭೂಮಿಯನ್ನು ಸಮುದ್ರದ ತಳದಲ್ಲಿ ಮುಳುಗಿಸಿದನು. ನಂತರ ಭೂಮಿಯನ್ನು ರಕ್ಷಿಸಲು, ವಿಷ್ಣುವು ವರಾಹ ರೂಪದಲ್ಲಿ ಅವತರಿಸಿದನು
ಮತ್ತು ಸಾವಿರಾರು ವರ್ಷಗಳ ಯುದ್ಧದ ನಂತರ ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಉಳಿಸಿದನು. ಇದೂ ಸಹ ಭಗವಂತನ ಸ್ವಯಂ–ಭೂ ಅವತಾರ.
- ನರಸಿಂಹ ಅವತಾರ: –
ಶ್ರೀಮದ್ ಭಾಗವತ ಮಹಾಪುರಾಣದಲ್ಲಿ ಮಹರ್ಷಿ ವೇದವ್ಯಾಸರು ನರಸಿಂಹ ಅವತಾರದ ಕುರಿತು ಹೀಗೆ ಹೇಳಿದ್ದಾರೆ–
“ದಿಬಿಸ್ಪೃಶತ್ಕಾಯ ಮದಿರ್ಘಪಿ ಬರಗ್ರೀಬೋರುಬಕ್ಷ್: ಸ್ಥಲಮಲುಮಧ್ಯಮ್ಮ್.
ಚಂದ್ರ ಶುಗೌರೇಶ್ಚುರಿತಂ ತದ್ವರುಹೈವ್ರ ರ್ವಿಶ್ವರಾಭುಜಾದಿಕಶತಂ ನಖಾಯುದ್ಧಮ್ ।
ವಿಶ್ವಕ ಸ್ಪುರನ್ತಂ ಗ್ರಹಣಾತುರಂ ಹರಿರ್ಬ್ಯಾಲೋ ಯಥಾನ್ಧನ್ಧಖು ಕುಲಿಶಕ್ಷತ್ತ್ವಚಮ್ ।
ದ್ವಾಯವರ ಆಪಾತ್ಯ ದದರ ಲೀಲಾಯಾ ನಖೈರ್ಯಥಾಹಿಂ ಗರುಡೋ ಮಹಾವಿಷಮ್|”
– ಭಾಗವತ ಪುರಾಣ –ಸ್ಕಂಧ 7 – ಅಧ್ಯಾಯ 8: ಶ್ಲೋಕ 29
ಕವಿ ಜೈದೇವ್ ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ನರಸಿಂಹ ಅವತಾರದ ಬಗ್ಗೆ ಬರೆಯುತ್ತಾರೆ–
“ತವ ಕರ ಕಮಲ ವರೇ ನಖಂ
ಅದ್ಭುತ ಶೃಂಗಂ ದಲಿತ ಹಿರಣ್ಯಕಶಿಪು
ತನು ಭೃಂಗಂ ಕೇಶವ ಧೃತ ನರಹರಿ ರೂಪ,
ಜಯ ಜಗದೀಶ್ ಹರೇ ||”
ಮೇಲಿನ ಸಾಲುಗಳ ಅರ್ಥವೇನೆಂದರೆ, ವಿಷ್ಣುವು ಈ ಅವತಾರದಲ್ಲಿ ಅರ್ಧ ಮನುಷ್ಯ ಮತ್ತು ಅರ್ಧ ಸಿಂಹವಾಗಿ ತನ್ನ ಭಕ್ತ ಪ್ರಹ್ಲಾದನನ್ನು ಆತನ ತಂದೆಯಾದ ಹಿರಣ್ಯಕಶಿಪುವಿನ (ರಾಕ್ಷಸ ರಾಜ) ದೌರ್ಜನ್ಯದಿಂದ ರಕ್ಷಿಸಿದನು. ಹಿರಣ್ಯಕಶಿಪುಗೆ ಗಾಳಿಯಿಂದ , ನೀರಿಯಿಂದ, ಸಮುದ್ರದಲ್ಲಿ, ಮನೆಯಲ್ಲಿ ಅಥವಾ ಹೊರಗೆ, ಹಗಲು, ರಾತ್ರಿ, ಅಸ್ತ್ರ ಅಥವಾ ಶಸ್ತ್ರ ಗಳಿಂದ ಯಾವುದೇ ಮನುಷ್ಯ ಅಥವಾ ಪ್ರಾಣಿಯಿಂದ ಅಂದರೆ, ಬ್ರಹ್ಮಾನಿಂದ ಸೃಷ್ಟಿಸಲ್ಪಟ್ಟ ಯಾವುದೇ ಜೀವಿಯಿಂದ ಅವನಿಗೆ ಸಾವು ಬರಬಾರದೆಂದು ವರವನ್ನು ಪಡೆದಿದ್ದನು. ನಂತರ, ಅವನು ತನ್ನನ್ನು ಅಮರ ಎಂದು ಪರಿಗಣಿಸಿದ್ದನು.
ಭಗವಂತನಾದ ನರಸಿಂಹನು ಸ್ತಂಭದಿಂದ ಪ್ರತ್ಯಕ್ಷ ನಾಗಿ, ಹಿರಣ್ಯಕಶಿಪುವನ್ನು ತನ್ನ ಮಡಿಲಲ್ಲಿ ಕೂರಿಸಿದನು ಮತ್ತು ಬಾಗಿಲಿನ ಪ್ರವೇಶದ್ವಾರದಲ್ಲಿ ಕುಳಿತು ಭಗವಂತನು ತನ್ನ ಉದ್ದನೆಯ ಉಗುರುಗಳಿಂದ ಅವನ ಹೊಟ್ಟೆಯನ್ನು ಸೀಳಿದನು. ಇದೂ ಸಹ ಭಗವಂತನ ಸ್ವಯಂಭೂ ಅವತಾರ.
- ವಾಮನ ಅವತಾರ: –
ಮಹರ್ಷಿ ವೇದವ್ಯಾಸ್ ಮಹಾರಾಜರು ಶ್ರೀಮದ್ ಭಾಗವತ್ ಮಹಾಪುರಾಣದಲ್ಲಿ ಹೀಗೆ ಹೇಳಿದ್ದಾರೆ –
“ಯತ್ ತದ್ ಬಾಪುರ್ಭತ್ ಬಿಭೂಷಣಾಯುಧೈರ್ವ್ಯಕ್ತಚಿದ್ ಬೈಕಾತ್ಮಧಾರಯನ್ಧಾರಿ😐
ಬಭುವ ತೇನೈಬ್ ಸ ವಾಮನೋ ಬಟು:ಸಂಪಶ್ಯತೇರ್ದಿವ್ಯಗತರ್ಯಥಾ ನಟ:”
ಶ್ರೀಮದ್ ಭಗವತ್ ಪುರಾಣ–ಅಷ್ಟಮ: ಸ್ಕಂಧ: ಅಷ್ಟಾದಶೋ‘ಧ್ಯಾಯ:
ಶ್ಲೋಕ 12
“ಧಾತು ಕಮಂಡಲುಜಲಂ ತದುರುಕ್ರಮತಸ್ಯ,
ಪಾದಾಬನೇಜನ ಪವಿತ್ರತಯಾ ನರೇಂದ್ರ|
ಸ್ವರ್ಧುನ್ಯ ಭುಂವಭಸಿ ಪತತಿ ನಿಮರ್ಷ್ಟಿ,
ಲೋಕತ್ರಯಂ ಭಗವತೋ ಬಿಶದೇವ ಕೀರ್ತಿ|”
ಶ್ರೀಮದ್ ಭಾಗವತ್ ಮಹಾಪುರಾಣ / ಸ್ಕಂಧ 08 / ಅಧ್ಯಾಯ: 21
ಕವಿ ಜೈದೇವ್ ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ವಾಮನ ಅವತಾರದ ಬಗ್ಗೆ ಬರೆಯುತ್ತಾರೆ–
“ಛಲಯಸಿ ವಿಕ್ರಮಣೇ ಬಲಿಂ ಅದ್ಭುತ
ವಾಮನ ಪದ ನಖ ನೀರ
ಜನಿತ ಜನ ಪಾವನ ಕೇಶವ ಧೃತ ವಾಮನ ರೂಪ,
ಜಯ ಜಗದೀಶ್ ಹರೇ ||”
ಅರ್ಥ:-
ಮೇಲಿನ ಎರಡೂ ಶ್ಲೋಕಗಳ ಅರ್ಥ ಈ ಅವತಾರವು, ಒಂದು ಕೈಯಲ್ಲಿ ಕಮಂಡಲು ಮತ್ತು ಇನ್ನೊಂದು ಕೈಯಲ್ಲಿ ಕೊಡೆ ಹಿಡಿದಿರುವ ಕುಬ್ಜನಂತೆ ಚಿತ್ರಿಸಲಾಗಿದೆ ಇಂದ್ರನ ರಾಜ್ಯವನ್ನು ಮರಳಿ ಪಡೆಯಲು ಭಗವಂತನು ಈ ಅವತಾರವನ್ನು ಧರಿಸಿದ್ದನು.ರಾಜ ಬಲಿ ಚಕ್ರವರ್ತಿಯು ವಿರೋಚನನ ಮಗ ಮತ್ತು ಹಿರಣ್ಯಕಶಿಪುವಿನ ಮೊಮ್ಮಗ. ಅವನು ತನ್ನ ತಪಸ್ಸಿನ ಬಲದಿಂದ ಮೂರು ಲೋಕಗಳಲ್ಲೂ ತನ್ನ ಪರಮಾಧಿಕಾರವನ್ನು ಸ್ಥಾಪಿಸಿದ್ದನು. ಅವನ ಪ್ರತಿಷ್ಠೆಯು ಇಂದ್ರನನ್ನು ಮರೆಮಾಡಲು ಪ್ರಾರಂಭಿಸಿದಾಗ, ಇಂದ್ರನು ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಭಗವಂತನಾದ ವಿಷ್ಣುವಿನ ಸಹಾಯವನ್ನು ಕೋರಿದನು.ಅದರ ನಂತರ, ಭಗವಂತನಾದ ವಿಷ್ಣುವು ದೇವಮಾತೆ ಅದಿತಿ ಮತ್ತು ಋಷಿ ಕಶ್ಯಪನ ಮಗನಾಗಿ ವಿಷ್ಣು ಎಂಬ ಹೆಸರಿನಿಂದ ಜನಿಸಿದನು. ಅವನ ಅತ್ಯಂತ ಚಿಕ್ಕ ರೂಪದಿಂದಾಗಿ, ಅವನನ್ನು ವಾಮನ ಎಂದು ಕರೆಯಲಾಯಿತು. ರಾಜ ಬಲಿಯ ಬಳಿಗೆ ಹೋಗಿ ತಪಸ್ಸು ಮಾಡಲು ಮೂರು ಅಡಿ ಭೂಮಿಯನ್ನು ನೀಡುವಂತೆ ವಿನಂತಿಸಿದನು. ಬಲಿ ಅವನ ಕೋರಿಕೆಯನ್ನು ಸ್ವೀಕರಿಸಿದಾಗ, ಭಗವಂತನಾದ ವಿಷ್ಣುವು ತನ್ನ ಅಲೌಕಿಕ ಶಕ್ತಿಯನ್ನು ಬಳಸಿ, ಮೊದಲ ಎರಡು ಅಡಿಗಳಲ್ಲಿ ಭೂಮಿ ಮತ್ತು ಸ್ವರ್ಗವನ್ನು ಸ್ವಾಧೀನಪಡಿಸಿಕೊಂಡು ಮೂರನೇ ಅಡಿಯ ಜಾಗ ಕೇಳಲು, ಬಲಿ ರಾಜನು ತನ್ನ ಉದಾತ್ತತೆಯನ್ನು ತೋರಿಸಿದನು ಮತ್ತು ಆತನ ತಲೆಯ ಮೇಲೆ ಮೂರನೇ ಪಾದವನ್ನು ಇಡುವಂತೆ ದೇವರನ್ನು ಕೇಳಿದನು. ವಿಷ್ಣುವು ಬಲಿಯ ಔದಾರ್ಯವನ್ನು ಕಂಡು ಸಂತೋಷಪಟ್ಟು ರಾಜ ಬಲಿಯನ್ನು ಪಾತಾಳದ ಅಧಿಪತಿಯನ್ನಾಗಿ ಮಾಡಿದನು.
- ಪರಶುರಾಮ ಅವತಾರ: –
ಮಹರ್ಷಿ ವೇದವ್ಯಾಸರು ಶ್ರೀಮದ್ ಭಾಗವತ ಮಹಾಪುರಾಣದಲ್ಲಿ ಹೀಗೆ ಹೇಳಿದ್ದಾರೆ –
“ಅವತಾರೇ ಷೋಡಶ್ಮೇ ಪಶ್ಯನ್ ಬ್ರಹ್ಮದ್ರುಹನೃಪಾನ ।
ತ್ರಿಸಪ್ತಕೃತ್ವಾ: ಕೃಪಿತೋನಿ: ಮಕರೋನ್ ಮಹಿಮ್ ।
“ಆಸ್ತೇಂದದ್ಯಪಿ ಮಹೇಂದ್ರಾದೈ ನ್ಯಸ್ತದಂಡ: ಪ್ರಶಾಂತದಿ😐
ಉಪಗೀಯಮಾನಚರಿತ್: ಸಿಂಧಗಂಧರ್ವಚಾರಣೈ😐
ಏವ ಭೃಗುಶು ಬಿಶ್ವಾತ್ಮ ಭಗವಾನ್ ಹರಿರೀಶ್ವರ ।
ಅಬತಿರ್ಯ ಪರಂ ಭಾರಂ ಭೂಬೋನ್ಧಹನ್ ಬಹುಶೋನೃಪನ್ ।”
ಕವಿ ಜಯದೇವ್ ತಮ್ಮ ಗೀತ್ ಗೋವಿಂದ್ ಗ್ರಂಥ ದಲ್ಲಿ ಹೀಗೆ ಬರೆಯುತ್ತಾರೆ –
“ಕ್ಷತ್ರಿಯ ರುಧೀರ ಮಯೇಜಗದ್ಅಪಗತ
ಪಾಪಂ ಸ್ರಪಯಸಿ ಪಯಸಿ ಶಮಿತ
ಭವ ತಾಪಂ ಕೇಶವ ಧೃತ ಭೃಗುಪತಿ ರೂಪ,
ಜಯ ಜಗದೀಶ್ ಹರೇ ||”
ಅರ್ಥ :-
ಎರಡೂ ಶ್ಲೋಕಗಳ ಅರ್ಥವೇನೆಂದರೆ, ಭಗವಾನ್ ವಿಷ್ಣುವು ತ್ರೇತಾಯುಗದಲ್ಲಿ ಜಮದಗ್ನಿ ಋಷಿ ಮತ್ತು ಅವನ ಪತ್ನಿ ರೇಣುಕೆಯ ಮಗನಾದ ಪರಶುರಾಮ/ಭೃಗುಪತಿಯಾಗಿ ಅವತರಿಸಿದನೆಂದು ಸೂಚಿಸುತ್ತದೆ. ಪರಶುರಾಮ (ಬಲಗೈಯಲ್ಲಿ ಕೊಡಲಿಯನ್ನು ಹಿಡಿದಿರುವ ಸ್ವರೂಪದ ಬಗ್ಗೆ ವಿವರಿಸಲಾಗಿದೆ) ವಿಷ್ಣುವಿನ ಆರನೇ ಅವತಾರವಾಗಿದೆ. ಈ ಅವತಾರದ ಸಮಯದಲ್ಲಿ, ಮಹಾಪ್ರಭು ಪರಶುರಾಮರು ಕ್ಷತ್ರಿಯರ ರಕ್ತದಿಂದ ಭೂಮಿ ತಾಯಿಯನ್ನು ಸಮಾಧಾನಪಡಿಸಿದರು. ತಂದೆಯ ಸಾವಿನಿಂದ ಕುಪಿತಗೊಂಡು 21 ಬಾರಿ ಭೂಮಿಯನ್ನು ಕ್ಷತ್ರೀಯರಿಲ್ಲದಂತೆ ಮಾಡಿದನೆಂದು ಹೇಳಲಾಗುತ್ತದೆ.
- ರಾಮ ಅವತಾರ: –
ಮಹರ್ಷಿ ವೇದವ್ಯಾಸರು ಶ್ರೀಮದ್ ಭಾಗವತ ಮಹಾಪುರಾಣದಲ್ಲಿ ಹೀಗೆ ಬರೆದಿದ್ದಾರೆ –
“ತತಃ ಪ್ರಜಗ್ಮು: ಪ್ರಶಂ ಮರುದ್ಗಣಾ,
ದಿಶ್: ಪ್ರಸೇಹುರ್ವಿಮಲ್ ನಭೋಂಧಭಾವತ್.
ಮಹಿ ಚಕಂಪೇ ನ ಚ ಮಾರುತೋ ಬಬ್ಬೈ,
ಸ್ಥಿರ ಪ್ರಭಾಶ್ಚಾಪ್ಯಭವತ್ ದಿವಾಕರ:।”
– ರಾಮಾಯಣ / ಯುದ್ಧಕಾಂಡ / ಸರ್ಗ: 111
ಅಧ್ಯಾತ್ಮ ರಾಮಾಯಣದಲ್ಲಿ ರಾಮನ ಅವತಾರದ ಬಗ್ಗೆ ಏನು ಬರೆಯಲಾಗಿದೆಯೋ , ಆ ಸಾಲುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ –
“ಏವ ಸ್ತುತಸ್ತು ದೇಬೇಶೋ ವಿಷ್ಣುಸ್ತಿದಶಪುಂಗಭಃ ।
ಪಿತಾಮಹ ಪುರೋಗಾಮ್ಸ್ಥಾನ ಸರ್ವಲೋಕಾನಮಸ್ಕೃತಃ ।“
“ಅಬ್ರಾಬಿತ್ ತ್ರಿದಶನ್ ಸರ್ವಾನ್ ಸಮೇತಾನ್ ಧರ್ಮ ಸಂಹಿತಾನ್|
ಸಪುತ್ರಪೌತ್ರ ಸಮತ್ಯ ಸಮನ್ತಿಜ್ಞಾತಿಬಾನ್ಧವಮ್ ।
ಹತ್ವಾ ಕುರನ್ದುರಾಧರ್ಶನ್ ದೇವರ್ಷಿಣ ಭಯಾ ಬಾಹಮ್ ।
ದಶವರ್ಷ ಶಹಸ್ರಾಣಿ ದಶವರ್ಷ ಶತಾನಿ ಚ ।
ವತ್ಸ್ಯಾಮಿ ಮಾನುಷೇ ಲೋಕೇ ಪಲಯನ್ ಪೃಥಿವೀಮಿಮಾಮ್ ।
ರಾವಣೇನ್ ಹೃತಂ ಸ್ಥಾನಂಸ್ಕಾಂಕಂ ತೇಜಸಾ ಸಹ,
ತ್ವಯಾದ್ಯ ನಿಹತೋ ದುಃಷ್ಟ ಪುನಃ ಪ್ರಾಪತಂ ಪದಂ ಸ್ವಕಮ್|”
ಕವಿ ಜೈದೇವ ಅವರು ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ರಾಮ ಅವತಾರದ ಬಗ್ಗೆ ಬರೆದಿದ್ದಾರೆ–
“ವಿತರಸಿ ದಿಕ್ಷು ರಣೇ ದಿಕ್ ಪತಿ
ಕಮನೀಯಂ ದಶ ಮುಖ ಮೌಲಿ ಬಲಿಂ
ರಮಣಿಯಂ ಕೇಶವ ಧೃತ ರಘುಪತಿ ರೂಪ,
ಜಯ ಜಗದೀಶ ಹರೇ ||”
ಅರ್ಥ :-
ಮೇಲೆ ಬರೆದ ಶ್ಲೋಕಗಳಲ್ಲಿ ಶ್ರೀರಾಮನು ವಿಷ್ಣುವಿನ ಏಳನೇ ಅವತಾರ ಎಂದು ಹೇಳಲಾಗಿದೆ. ಅವರು ಅಯೋಧ್ಯೆ ರಾಜ ಸೂರ್ಯವಂಶಿ ಮಹಾರಾಜ ದಶರಥ ಮತ್ತು ಮಾತಾ ಕೌಸಲ್ಯೆಯ ಮಗನಾಗಿ ಬಂದರು. ಈ ಅವತಾರದಲ್ಲಿ ಭಗವಾನ್ ಶ್ರೀರಾಮನ ಮುಖ್ಯ ಶಸ್ತ್ರವೆಂದರೆ ಬಿಲ್ಲು ಮತ್ತು ಬಾಣ. ಅವನು ದಶಾನನ ರಾವಣನನ್ನು ಕೊಂದು ತನ್ನ ಹೆಂಡತಿ ಸೀತೆಯನ್ನು ರಾವಣನ ಬಂಧನದಿಂದ ಮುಕ್ತಗೊಳಿಸಿದನು. ಇದು ತ್ರೇತಾಯುಗದಲ್ಲಿ ಧರ್ಮ ಸಂಸ್ಥಾಪನೆಯ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ.
ಈ ಕಾರ್ಯದಲ್ಲಿ ಲಕ್ಷ್ಮಣ (ಅವನ ಕಿರಿಯ ಸಹೋದರರಲ್ಲಿ ಒಬ್ಬರು) ಮತ್ತು ಹನುಮಾನ್ (ವಾನರ ದೇವರು) ಅವರಿಗೆ ಸಹಾಯ ಮಾಡಿದರು. ಈ ಕಥೆಯ ಸಂಪೂರ್ಣ ವಿವರಣೆಯನ್ನು ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿ ಮಾಡಲಾಗಿದೆ. ನೈತಿಕ ಶ್ರೇಷ್ಠತೆಯೊಂದಿಗೆ ಭಗವಾನ್ ಶ್ರೀರಾಮನ ಜೀವನ ಪರಿಪೂರ್ಣವಾಗಿತ್ತು
ರಾಜರಲ್ಲಿ ಅವರು ಏಕ ಪತ್ನಿ ವ್ರತಸ್ಥರಾಗಿದ್ದರು. ಅವರು ವಿಶ್ವದ ಶ್ರೇಷ್ಠ ಚಕ್ರವರ್ತಿಯಾಗಿದ್ದರು. ಪ್ರಜೆಗಳನ್ನು ಪಾಲನೆ ಮಾಡುವುದರಲ್ಲಿ ಅವರಿಗಿಂತ ಮಿಗಿಲಾದವರು ಯಾರೂ ಇರಲಿಲ್ಲ. ಅವರು ಮಹಾನ್ ಯೋಧ ಮತ್ತು ಪರಾಕ್ರಮಿ. ಅವರ ಹೆಸರಿನ ಭಯದಿಂದಾಗಿ ರಾಕ್ಷಸರು ಮತ್ತು ದುಷ್ಕರ್ಮಿಗಳು ಹೆದರುತ್ತಿದ್ದರು. ಇಂದಿಗೂ ಅವರ ರಾಜ್ಯ ಅಯೋಧ್ಯೆಯನ್ನು ಆದರ್ಶ ರಾಜ್ಯವೆಂದು ಪರಿಗಣಿಸಲಾಗಿದೆ. ಆದುದರಿಂದಲೇ ಇಂದಿಗೂ ನಾವು ಆದರ್ಶ ರಾಜ್ಯವನ್ನು ‘ರಾಮರಾಜ್ಯ’ ಎಂದು ಕರೆಯುತ್ತೇವೆ.
ಮರ್ಯಾದೆ ಮತ್ತು ಆದರ್ಶಗಳನ್ನು ಪಾಲನೆ ಮಾಡಿದ ಕಾರಣ, ಅವರನ್ನು “ಮರ್ಯಾದಾಪುರುಷೋತ್ತಮ“ ಎಂದು ಕರೆಯಲಾಯಿತು ಮತ್ತು ಮುಂದೆಯೂ ಕರೆಯಲಾಗುವುದು.
- ಬಲರಾಮ / ಹಲಧರ ಅವತಾರ: –
ಶ್ರೀಮದ್ ಭಾಗವತ್ ಮಹಾಪುರಾಣದಲ್ಲಿ, ಮಹರ್ಷಿ ವೇದವ್ಯಾಸ ಮಹಾರಾಜರು ಬಲರಾಮ ಅವತಾರದ ಬಗ್ಗೆ ಬರೆದಿದ್ದಾರೆ –
′′ಸ ಅಜುಹಾಬ್ ಯಮುನಾಮ್ ಜಲಕ್ರೀಡಾ ರ್ಥ್ಮೀಶ್ವರ.
ನಿಜಂ ಬಾಕ್ಯಮನಾದೃತ್ಯಾ ಮಭ್ ರಥ್ಯಾಪಂಗಾ ಬಲಮ್ ।
ಅನಾಗತಂ ಹಲಾಗ್ರೇಣ ಕುಪಿತೋ ಬಿಚಕರ್ಷ ಹ |
ಪಾಪೇ ತ್ವಮ್ ಮಾಮವಜ್ಞಾಯ ಯಾನ್ನಾಯಾಸಿ ಮಯನ್ಧಹುತಾ ।
ನೇಷ್ಯೇ ತ್ವಾಂ ಲಂಗಲಾಗ್ರೇಣ ಶತಧಾ ಕಾರ್ಯ ಚಾರಿಣೀಮ್ ।
ಏವ ನಿರ್ಭತ್ಸಿತಾ ಭೀತಾ ಯಮುನಾ ಯದುನಂದ ನಮ್ ॥
ಉವಾಚ ಚಕಿತ ವಾಚಂ ಪತಿತ ಪಾ ದಯೋರ್ನೃಪ್ ।”
– ಶ್ರೀಮದ್ ಭಗವತ್ಪುರಾಣಂ / ಸ್ಕಂಧ: 10 / ಉತ್ತರಾರ್ಧ / ಅಧ್ಯಾಯ: 65
ಕವಿ ಜಯದೇವ ಮಹಾರಾಜರು ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ಹಲಧರ ಅವತಾರದ ಬಗ್ಗೆ ವಿವರಿಸಿದ್ದಾರೆ –
“ವಹಸಿ ವಪುಶಿ ವಿಸದೇ ವಸನಂ ಜಲಧಾಬಮ್
ಹಲ ಹತಿ ಭೀತಿ ಮಿಲಿತ ಯಮುನಾಭಮ್
ಕೇಶವ ಧೃತ ಹಲಧರ ರೂಪ,
ಜಯ ಜಗದೀಶ ಹರೇ ||”
ಅರ್ಥ:-
ದ್ವಾಪರ ಯುಗದಲ್ಲಿ ಪ್ರಭು ಬಲರಾಮನು ಗೋಪಿ ಗೋಪಾಲರ ಜೊತೆ ಯಮುನಾ ತೀರದಲ್ಲಿ ಲೀಲೆಯನ್ನು ಮಾಡಿದ್ದರು. ಅವರೆಲ್ಲರೂ ಯಮುನಾ ನದಿಯಲ್ಲಿ ಸ್ನಾನ ಮಾಡಲು ಹೋದಾಗ, ಯಮುನಾ ನದಿಯು ತನ್ನ ಅಹಂಕಾರದ ಕಾರಣ ಸ್ನಾನ ಮಾಡಲು ಅವಕಾಶ ಕೊಡಲಿಲ್ಲ. ಆ ಸಮಯದಲ್ಲಿ ಬಲರಾಮನು ತನ್ನ ನೇಗಿಲಿನಿಂದ ಮಣ್ಣನ್ನು ಕಿತ್ತು ಯಮುನಾ ನದಿಯ ಮಾರ್ಗವನ್ನು ಬದಲಾಯಿಸಿದನು ಮತ್ತು ನದಿಯ ಅಹಂಕಾರವನ್ನು ಮುರಿದನು.
- ಬುದ್ಧನ ಅವತಾರ: –
ಶ್ರೀಮದ್ ಭಾಗವತ ಮಹಾಪುರಾಣದಲ್ಲಿ, ಮಹರ್ಷಿ ವೇದವ್ಯಾಸ ಮಹಾರಾಜರು ಭಗವಾನ್ ಬುದ್ಧನ ಅವತಾರದ ಬಗ್ಗೆ ಬರೆಯುತ್ತಾರೆ–
“ತತಃ ಕಲೈ ಸಂಪ್ರಭೃತ್ತೆ ಸಮ್ಮೋಹಾಯ ಸುರದೀಕ್ಷಾಮ್|
ಬುದ್ದೋ ನಾಮ್ನಜನಸುತ: ಕಿಂಕಟೇಷು ಭವಿಷ್ಯತಿ||”
– ಭಾಗವತ್ ಸ್ಕಂಧ 1 ಅಧ್ಯಾಯ 6 ಶ್ಲೋಕ 19-29
ಕವಿ ಜೈದೇವ ಮಹಾರಾಜರು ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ಬುದ್ಧನ ಅವತಾರದ ಬಗ್ಗೆ ಬರೆದಿದ್ದಾರೆ –
“ನಿಂದಸಿ ಯಜ್ಞ ವಿದೇರ ಅಹ: ಶ್ರುತಿ ಜಾತಂ
ಸದಯ ಹೃದಯ ದರ್ಶಿತ ಪಶು ಘಾತಂ
ಕೇಶವ ಧೃತ ಬುದ್ಧ ಶರೀರ,
ಜಯ ಜಗದೀಶ ಹರೇ||”
ಅರ್ಥ:-
ಈ ಸಾಲುಗಳಲ್ಲಿ ಭಗವಾನ್ ಬುದ್ಧ ವಿಷ್ಣುವಿನ ಒಂಬತ್ತನೇ ಅವತಾರ ಎಂದು ಹೇಳಲಾಗಿದೆ.
ಕಲಿಯುಗದಲ್ಲಿ, ನಾಸ್ತಿಕರನ್ನು ಓಲೈಸಲು ಒರಿಸ್ಸಾದ ಕೀಂಕಟ್ ನಗರದಲ್ಲಿ(ಕೆಲವೆಡೆ ನೇಪಾಳದ ಲುಂಬಿನಿ ಸ್ಥಳ ವೆಂದು ವರ್ಣಿಸಲಾಗಿದೆ ) ಅಜನನ ಮಗನಾಗಿ ಜನಿಸಿದರು. ಆಧುನಿಕ ಮಾನ್ಯತೆಯ ಪ್ರಕಾರ, ಗೌತಮ ಬುದ್ಧನನ್ನು ವಿಷ್ಣುವಿನ ಅವತಾರ ಎಂದು ಕರೆಯಲಾಗುತ್ತದೆ
ಭಗವಾನ್ ಬುದ್ಧನು ಕಲಿಯುಗ ಮಧ್ಯದಲ್ಲಿ ಅವತರಿಸಿ ಯಜ್ಞಗಳಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ಪದ್ಧತಿಯನ್ನು ಮುಕ್ತಿಗೊಳಿಸಿ, ಧರ್ಮ ಸಂಸ್ಥಾಪನೆ ಕಾರ್ಯವನ್ನು ಮಾಡಿದರು.
- ಕಲ್ಕಿ ಅವತಾರ:-
ಶ್ರೀಮದ್ ಭಾಗವತ ಮಹಾಪುರಾಣದಲ್ಲಿ, ಮಹರ್ಷಿ ವೇದವ್ಯಾಸ ಮಹಾರಾಜರು ಕಲ್ಕಿ ಅವತಾರದ ಬಗ್ಗೆ ಹೀಗೆ ಬರೆಯುತ್ತಾರೆ: –
“ಅಥಸೈ ಯುಗಸಂಧ್ಯಾಯಾಂ ದಸ್ಯುಪ್ರಯೇಷು ರಾಜಸು,
ಜನಿತಾ ವಿಷ್ಣುಯಶಸಾ ನಾಮ್ನಾ ಕಲ್ಕಿರ್ಜಗತ್ಪತಿ ।
ಬಾದೈರ್ವಿ ಮೋಹಯತಿ ಯಜ್ಞಕೃತೋರ್ನ್ಧದರ್ಹನ್,
ಶೂದ್ರಾನ್ ಕಲೌ ಕ್ಷಿತಿಭುಜೋ ನ್ಯಹ್ನಿಷ್ಯದನ್ತೇ ।“
ಶ್ರೀ ಮದ್ದಾ ಭಾಗವತ–ಪ್ರಥಮ: ಸ್ಕಂಧ: ತೃತೀಯ ಅಧ್ಯಾಯ ಶ್ಲೋಕ -25
ಕವಿ ಜೈದೇವ ಮಹಾರಾಜರು ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ಕಲ್ಕಿ ಅವತಾರದ ಬಗ್ಗೆ ಬರೆದಿದ್ದಾರೆ –
“ಮ್ಲೇಚ್ಛ ನಿವಹ ನಿಧನೇ ಕಲಯಸಿ
ಕರವಾಲಂ ಧೂಮ ಕೇತುಂ ಇವ ಕಿಮ್
ಅಪಿ ಕರಾಲಂ ಕೇಶವ ಧೃತ ಕಲ್ಕಿ ಶರೀರ,
ಜಯ ಜಗದೀಶ ಹರೇ ||”
ಅರ್ಥ:-
ಇದು ಕಲಿಯುಗದಲ್ಲಿ ಭಗವಂತನಾದ ವಿಷ್ಣುವಿನ ಮೂರನೇ ಅವತಾರವಾಗಿದೆ ಮತ್ತು ವಿಷ್ಣುವಿನ ಅವತಾರಗಳಲ್ಲಿ ಹತ್ತನೇ ಅವತಾರವಾಗಲಿದ್ದು, ಇದನ್ನು ವಿಶ್ವದಲ್ಲಿ ಕಲ್ಕಿ ಅವತಾರ ಎಂದು ಕರೆಯಲಾಗುತ್ತದೆ. ಈ ಕಲಿಯುಗದಲ್ಲಿ ಭಗವಾನ್ ಕಲ್ಕಿಯು ಧೂಮಕೇತುವಿನಂತೆ ಉಗ್ರ ರೂಪವನ್ನು ತಾಳಿ, ಕೈಯಲ್ಲಿ ದೊಡ್ಡ ಖಡ್ಗವನ್ನು ಹಿಡಿದು, ಕುದುರೆಯ ಮೇಲೆ ಸವಾರಿ ಮಾಡಿ, ದುಷ್ಟರನ್ನು, ಪಾಪಿಗಳನ್ನು, ಅತ್ಯಾಚಾರರನ್ನು, ದುರಾಚಾರರನ್ನು, ಮ್ಲೇಚ್ಛರನ್ನು ನಾಶಪಡಿಸುತ್ತಾನೆ ಮತ್ತು ಭೂಮಿಗೆ ಸತ್ಯ ಯುಗವನ್ನು ತಂದು ಧರ್ಮ ಸಂಸ್ಥಾಪನೆ ಮಾಡುತ್ತಾನೆ.
ಮೇಲಿನ ದಶಾವತಾರದ ವರ್ಣನೆಯನ್ನು ಶಾಸ್ತ್ರಗಳಲ್ಲಿ ಮಾಡಲಾಗಿದೆ. ಇದನ್ನು ಓದುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಶ್ರೀಮದ್ ಭಾಗವತ್ ಮಹಾಪುರಾಣದಲ್ಲಿ ವರ್ಣನೆ ಮಾಡಲಾಗಿದೆ.
“ಶ್ರಣ್ವತಾಂ ಸ್ವಕತ್ಹಾಂ ಕೃಷ್ಣ ಪೂರ್ಣಶ್ರವಣಕೀರ್ತನಃ.
ಹೃದ್ಯನ್ತಸ್ಥೋ ಹ್ಯಬ್ಪ್ರಾಣಿ ಸುದುತಶತಮ್ ।
ಜನ್ಮ ಗುಹ್ಯ ಭಗವತೋ ಯ ಏತತ್ ಪ್ರಯತೋ ನರಃ ।
ಸಾಯಂ ಪ್ರಥ:ರ್ಗುಣಾನ್ ಭಕ್ತ್ಯಾ ದುಃಖ ಗ್ರಾಮದ್ ಬಿಮುಖತೇ.”
ಶ್ರೀಮದ್ ಭಾಗವತ ಪ್ರಥಮ ಸ್ಕಂಧ : ದ್ವಿತೀಯ ಅಧ್ಯಯ: ಶ್ಲೋಕ -17
ಶ್ರೀ ಜೈ ದೇವ ಮಹಾರಾಜರು ಈ ದಶಾವತಾರವನ್ನು ಓದುವ ಮತ್ತು ಕೇಳುವ ಪ್ರಯೋಜನಗಳ ಬಗ್ಗೆ ಈ ಕೆಳಗಿನಂತೆ ಬರೆಯುತ್ತಾರೆ:-
“ಶ್ರೀ ಜಯದೇವ ಕವೇರ ಇದಂ
ಉದಿತಮ್ಉದಾರಾಂ ಶೃಣು ಸುಖ ದಂ ಶುಭ
ದಂ ಭವ ಸಾರಂ ಕೇಶವ ಧೃತ ದಶವಿಧ ರೂಪ,
ಜಯ ಜಗದೀಶ ಹರೇ ||”
ಅರ್ಥ:-
ಭಗವಂತನಾದ ವಿಷ್ಣುವಿನ ದಶಾವತಾರ ಸ್ತೋತ್ರವನ್ನು ಪಠಿಸುವುದು ಶುಭ ಮತ್ತು ಸುಖದಾಯಕ . ಇದನ್ನು ಓದುವ ಅಥವಾ ಕೇಳುವ ಮೂಲಕ ಭಗವಂತನ ಅನುಗ್ರಹವನ್ನು ಪಡೆಯುತ್ತಾನೆ ಮತ್ತು ಜೀವನದ ಭವ ಸಾಗರದಿಂದ ಮೋಕ್ಷವನ್ನು ಪಡೆಯುತ್ತಾನೆ.
ಶ್ರೀ ಜೈದೇವ್ ಮಹಾರಾಜರು ತಮ್ಮ ಗೀತ್ ಗೋವಿಂದ್ ಗ್ರಂಥದಲ್ಲಿ ಬರೆದ ದಶಾವತಾರ ಸ್ತೋತ್ರದ ಕೊನೆಯಭಾಗದಲ್ಲಿ ಹೀಗೆ ಬರೆಯುತ್ತಾರೆ:-
“ವೇದಾನುದ್ಧರತೇ ಜಗನ್ತಿ, ವಹ ಭೂಗೋಲತೆ ಮುದ್ಬಿಭ್ರತೇ
ದೈತ್ಯಂ ದಾರಯತೇ ಬಲಿಂ ಚಲಯತೇ ಕ್ಷತ್ರಕ್ಷಯಂ ಕುರ್ವತೇ ।
ಪೌಲಸ್ತ್ಯಂ ಜಯತೇ ಹಲಂ ಕಲ್ಯತೇ ಕಾರುಣ್ಯಮಾತನ್ವತೇ
ಮ್ಲೇಚ್ಛನ್ಮೂರ್ಛಾಯತೇ ದಶಕೃತ್ಕೃತೇ ಕೃಷ್ಣಾಯ ತುಭ್ಯಂ ನಮಃ.”
ಹೇ ಕೃಷ್ಣಾ! ಸಾಗರದಲ್ಲಿ ಮುಳುಗಿದ ವೇದಗಳನ್ನು ಮೀನಿನ ರೂಪ ತಳೆದು ಕಾಪಾಡಿದೆ. ಆಮೆಯ ರೂಪವನ್ನು ತಳೆದು, ಸಾಗರ ಮಂಥನದ ಸಮಯದಲ್ಲಿ ಭೂಮಿಯನ್ನು ಬೆನ್ನ ಮೇಲೆ ಹೊತ್ತು ಭೂಮಿಯನ್ನು ರಕ್ಷಿಸಿದೆ. ವರಾಹದ ರೂಪವನ್ನು ತಾಳಿ ಏಕಾರ್ಣವದಲ್ಲಿ ಮುಳುಗಿದ ಭೂಮಾತೆಯನ್ನು ರಕ್ಷಿಸಿದೆ. ನರಸಿಂಹನ ರೂಪದಲ್ಲಿ ಹಿರಣ್ಯಕಶಿಪು ರಾಕ್ಷಸರನ್ನು ಸಂಹರಿಸಿ ಧರ್ಮವನ್ನು ಸ್ಥಾಪಿಸಿದೆ. ವಾಮನ ಅವತಾರದಲ್ಲಿ, ವಾಮನನ ದೇಹವನ್ನು ಅಂದರೆ 52 ಅಂಗುಲದಷ್ಟು ಶರೀರ ಹೊಂದಿ , ರಾಕ್ಷಸ ರಾಜ ಬಲಿಯನ್ನು ವಂಚಿಸಿದೆ. ಬ್ರಾಹ್ಮಣ ಕುಲದಲ್ಲಿ ಪರಶುರಾಮನ ರೂಪದಲ್ಲಿ ಜನ್ಮ ಪಡೆದು, ಆ ಕಾಲದ ದುಷ್ಟ ಕ್ಷತ್ರಿಯರನ್ನು ಸಂಹರಿಸಿದೆ. ಶ್ರೀರಾಮನ ರೂಪದಲ್ಲಿ, ರಾವಣನ ವಧೆ ಗೈದೆ. ಶ್ರೀ ಬಲರಾಮನ ರೂಪದಲ್ಲಿ ನೇಗಿಲನ್ನು ಆಯುಧವಾಗಿ ಸ್ವೀಕರಿಸಿದೆ. ಬುದ್ಧನ ರೂಪದಲ್ಲಿ ಕರುಣೆಯನ್ನು ಸಾರಿದೆ ಮತ್ತು ಕಲ್ಕಿಯ ರೂಪದಲ್ಲಿ ಪಂಚ ಮಹಾಭೂತಗಳ ಮೂಲಕ ಮತ್ತು ಮಹಾಯುದ್ಧದಲ್ಲಿ ಖಡ್ಗದಿಂದ ಮ್ಲೇಚ್ ರನ್ನು ನಾಶ ಮಾಡಿ, ಧರ್ಮಸಂಸ್ಥಾಪನೆ ಮಾಡುವೆ. ದಶಾವತಾರದ ರೂಪದಲ್ಲಿ ಕಾಣಿಸಿಕೊಂಡ ಮಹಾಪ್ರಭು ಶ್ರೀ ಕೃಷ್ಣ ನಾನು ನಿಮ್ಮ ಪಾದಪದ್ಮಗಳಿಗೆ ವಂದಿಸುತ್ತೇನೆ .
ಭವಿಷ್ಯ ಮಾಲಿಕಾ ಗ್ರಂಥದ ಲೇಖಕರಾದ ಮಹಾನ್ ವ್ಯಕ್ತಿ ಅಚ್ಯುತಾನಂದರು ತಮ್ಮ ಅಷ್ಟಗುಜ್ಜರಿ ಗ್ರಂಥ ದಲ್ಲಿ ಹೀಗೆ ಬರೆಯುತ್ತಾರೆ–
“ಭಾವ ವಿನೋದಿಯಾ ಠಾಕೂರ್ ಭಕ್ತ ವತ್ಸಲ್ ಹರಿ,
ಭಕ್ತ೦ಕ ಪಾಈ ಕಲೇವರ ದಶ ಮೂರತಿ ಧರಿ|”
ಅರ್ಥ:-
ಭಗವಾನ್ ವಿಷ್ಣು, ಭಕ್ತ ವತ್ಸಲ, ಭಕ್ತರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಕರುಣಾ ಸಾಗರ, ಪ್ರತಿ ಯುಗದಲ್ಲೂ ಭಕ್ತರ ಕಲ್ಯಾಣಕ್ಕಾಗಿ ಹತ್ತು ಅವತಾರಗಳನ್ನು ತೆಗೆದುಕೊಳ್ಳುತ್ತಾರೆ.
“ಜೈ ಜಗನ್ನಾಥ”