ಕಪಿಲ ಮಹಾಮುನಿ ಗಳು ಮತ್ತು ಮಹಾನ್ ವ್ಯಕ್ತಿ ಅಚ್ಯುತಾನಂದ ದಾಸರವರು ಬರೆದ “ಕಪಿಲ್ ಸಂಹಿತಾ” ಮತ್ತು ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು….
“ಬಲರಾಮ ಹೇಬೆ ರಾಜಾ ಕಾನ್ಹು ಪರಿಚಾರ, ಬಸಿಬ ಸುಧರ್ಮ ಸಭಾ ಜಾಜನಗ್ರಾ ಠಾರ, ವೀಣಾ ಬಾಹೀನ ನಾರದ ಮಿಲಿಬೆ ಚಾಮುರೇ, ವೇದ ಪಡುತುಬೇ ಬ್ರಹ್ಮ ಅಚ್ಯುತ ಆಗುರೇ ।“
ಅರ್ಥ:
ಯಾವಾಗ ಸುಧರ್ಮ ಸಭೆಯು , ಆಗ ನಾರದ ಮಹಾಮುನಿ ಸ್ವತಃ ಆ ಸಭೆಯಲ್ಲಿ ವೀಣೆಯನ್ನು ನುಡಿಸುತ್ತಾರೆ ಮತ್ತು ಬ್ರಹ್ಮನು ಅಲ್ಲಿ ವೇದಗಳನ್ನು ಪಠಿಸುವನು ಮತ್ತು ದೇವರಾಜ ಇಂದ್ರನು ಸಹ ಅಲ್ಲಿ ಎಲ್ಲಾ ದೇವತೆಗಳೊಂದಿಗೆ ಪ್ರತ್ಯಕ್ಷನಾಗುತ್ತಾನೆ. ಆ ಅದ್ಭುತ ಸಭೆಯಲ್ಲಿ ಲೋಕಗಳ ಪ್ರಭು! ಬಲರಾಮ ರೂಪದಲ್ಲಿ, ಅವರು ಸ್ವತಃ ಸುಧರ್ಮ ಸಭೆ ಮತ್ತು ವಿಶ್ವದ ಅಧಿಪತಿಯಾಗvaru. ಈ ದೃಶ್ಯ ಅದ್ಭುತವಾಗಲಿದೆ. ಸುಧರ್ಮ ಸಭೆ ಒರಿಸ್ಸಾ ರಾಜ್ಯದ ಜಾಜ್ಪುರ ನಗರದಲ್ಲಿ ಆದಿಶಕ್ತಿ ಬಿರಜಾ ದೇವಿ ನೆಲೆಸಿರುವ ಪುಣ್ಯಭೂಮಿಯಲ್ಲಿ ನಡೆಯಲಿದೆ.
ಮಹಾಪುರುಷ ಅಚ್ಯುತಾನಂದರು ಮಾಲಿಕಾದಲ್ಲಿರುವ ಪವಿತ್ರ ಬಿರಜಾ staladaದ ಬಗ್ಗೆ ಬರೆಯುತ್ತಾರೆ …
“ಉತ್ತರರೂ ಸನ್ಯಾಸಿ ಜೇ ಮಾಡೀನ ಆಸಿಬೆ, ಜಾಜನಗ್ರ ಗೇರಿಜಿಬೆ ಸರ್ವೆ ದೇಖುತಿಬೆ“.
ಅರ್ಥ:
ಇಡೀ ಪ್ರಪಂಚದ ಮತ್ತು ಹಿಮಾಲಯದ ಎಲ್ಲಾ ತಪಸ್ವಿ ಸಂತರು ದೇವರನ್ನು ಹುಡುಕುತ್ತಾ ಜಾಜನಗರಕ್ಕೆ ನಾಲ್ಕು ಕಡೆಯಿಂದ ಬರುತ್ತಾರೆ ಮತ್ತು ಮುಂದಿನ ದಿನಗಳಲ್ಲಿ ಎಲ್ಲ ಭಕ್ತರು ಭಗವಂತನ ಈ ವಿಚಿತ್ರ ಲೀಲೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕಪಿಲ್ ಮುನಿ ಕಪಿಲ ಸಂಹಿತೆಯಲ್ಲಿ ಬರೆಯುತ್ತಾರೆ…
“ದೇಶಾಂತ ಪ್ರಥಮ ಖೇತ್ರಂ ಪಾರ್ವತಿ ಖೇತ್ರೇ ವಚಃ , ಬಿರಜಾವಾಂ ಮಹಾದೇವಿ ಪಾರ್ವತಿ ಬ್ರಹ್ಮರೂಪಿಣಿ, ಭಕ್ತನಾ: ಹಿತಾರ್ಥಾಯಃ ಉತ್ಕಲೇ ಭೂಮಿಸ್ಥಾಂತಹಿತಃ, ಭಕ್ತನಾ: ಹಿತಾರ್ಥಾಯಃ ಉತ್ಕಲೇ ಮಿಸ್ಥಾತಾಹಿತಃ ||“
ಅರ್ಥ:
ಭಗವಂತನ ಇಪ್ಪತ್ತನಾಲ್ಕು ಅವತಾರಗಳಲ್ಲಿ ಒಂದಾದ ಕಪಿಲ ಮಹಾಮುನಿ ಬಿರಜಾ ಕ್ಷೇತ್ರದ ಬಗ್ಗೆ ಬರೆದಿದ್ದಾರೆ. ಇಡೀ ಭೂಮಿಯ ಮೇಲೆ ಯಾವುದೇ ಶಕ್ತಿಪೀಠವಿಲ್ಲದಿದ್ದಾಗ, ಈ ಪವಿತ್ರ ಸ್ಥಳದಲ್ಲಿ ಆದಿಶಕ್ತಿ ಬಿರಜಾ ದೇವಿವನ್ನು ಬ್ರಹ್ಮ ದೇವರಿಂದ ಪ್ರತಿಷ್ಠಾಪಿಸಲಾಯಿತು. ಬಿರಜಾ ದೇವಿ ಶಕ್ತಿಪೀಠವು ಪ್ರಪಂಚದ ಎಲ್ಲಾ ಶಕ್ತಿಪೀಠಗಳಲ್ಲಿ ಅತ್ಯಂತ ದೊಡ್ಡದು ಮತ್ತು ಪ್ರಾಚೀನವಾದುದು, ಈ ಸ್ಥಳವು ಪಾರ್ವತಿ ಕ್ಷೇತ್ರವೆಂದೂ ಪ್ರಸಿದ್ಧವಾಗಿದೆ. ತಾಯಿ ಪಾರ್ವತಿ ಯೋಗಮಾಯೆ, ಆಕೆಯನ್ನು ಬ್ರಹ್ಮಸ್ವರೂಪಿಣಿ ಎಂದೂ ಕರೆಯುತ್ತಾರೆ. ಪ್ರಸ್ತುತ ಅವರು ಒರಿಸ್ಸಾ ರಾಜ್ಯದ ಉತ್ಕಲ್ ಅಂದರೆ ಬಿರಜಾ ಪ್ರದೇಶದಲ್ಲಿ ಪೂಜಿಸಲ್ಪಡುತ್ತಿದ್ದಾರೆ. ಪಾರ್ವತಿಯು ದೇವಿಯು ಬಿರಜಾ ದೇವಿ ರೂಪದಲ್ಲಿ ಈಗಲೂ ಜಾಜ್ಪುರದಲ್ಲಿ ಇದ್ದಾಳೆ. ಕೆಲವು ವರ್ಷಗಳ ನಂತರ ಸುಧರ್ಮ ಸಭೆಯು ಬಿರಜಾ ಪ್ರದೇಶದಲ್ಲಿ ನಡೆಯುತ್ತದೆ ಮತ್ತು ಸುಧರ್ಮ ಸಭೆಯು ಅದ್ಭುತ ಮತ್ತು ಅಪರೂಪದ ಘಟನೆಗೆ ಸಾಕ್ಷಿಆಗಲಿದೆ.
“ಜೈ ಜಗನ್ನಾಥ”