ಮಹಾನ್ ವ್ಯಕ್ತಿ ಅಚ್ಯುತಾನಂದ ದಾಸರು ಬರೆದ ಮಾಲಿಕಾದ ದೈವಿಕ ಸಾಲು ಮತ್ತು ಸಂಗತಿಗಳು-
“ದೃತಿಯ ಅಜೋಧ್ಯಾ ಪುರಿ ಪ್ರಕಾಶಿಬ್ ರಘುನಾಥಂಕ್ ಬಿಹಾರೋ,
ಸೇದಿನ್ ಎಪುರೋ ಉತ್ಕಲ್ ನಗರ್ ರಶಸ್ಥಲಿ ಹೊಯ್ಜಿಬೋ.”
ಅರ್ಥ –
ಎಲ್ಲಿ ಜಗತ್ಪತಿ ನೆಲೆಸಿರುವನೋ ಅಲ್ಲಿಯ ಭೂಮಿ ಅಯೋಧ್ಯೆ ಮತ್ತು ವೃಂದಾವನದಂತೆ ಪವಿತ್ರವಾಗುತ್ತದೆ. ಕಲಿಯುಗದಲ್ಲಿ ಭಗವಾನ್ ಕಲ್ಕಿ ನೆಲೆಸಲಿರುವ ಒಡಿಶಾದ ಉತ್ಕಲ್ (ಬಿರ್ಜಾ ಪ್ರದೇಶ) ಪುಣ್ಯಭೂಮಿಯಾಗಿ ಪರಿವರ್ತನೆಯಾಗುವುದು. ಭಕ್ತವತ್ಸಲ ಕಲ್ಕಿರಾಮ್ ಅನಂತ ಮಾಧವ ಮಹಾಪ್ರಭುಗಳು ತಮ್ಮ ಪ್ರಿಯ ಭಕ್ತರೊಂದಿಗೆ ಲೀಲೆಗಳನ್ನು ಮಾಡುತ್ತಾರೆ ಮತ್ತು ಪ್ರಿಯ ಭಕ್ತರನ್ನು ತಮ್ಮ ವಾತ್ಸಲ್ಯದಿಂದ ಸಂತೋಷಗೊಳಿಸುತ್ತಾರೆ. ಭಕ್ತರೆಲ್ಲರೂ ಭಕ್ತಿಯ ಸಾಗರದಲ್ಲಿ ಮುಳುಗಿಹೋಗುತ್ತಾರೆ.
ಉತ್ತರ ಪ್ರದೇಶದ ನಂತರ ಉತ್ಕಲ ಭೂಮಿಯನ್ನು ಎರಡನೇ ಅಯೋಧ್ಯೆಯಾಗಿ ಪ್ರಭು ಎಲ್ಲರ ಸಮಕ್ಷಮ ಪ್ರಸ್ತುತಪಡಿಸುತ್ತಾರೆ. ಇದಾದ ನಂತರ ಕಲ್ಕಿ ದೇವರನ್ನು ಭಕ್ತರು “ಕಲ್ಕಿರಾಮ” ಎಂಬ ಹೆಸರಿನಿಂದ ಸಂಬೋಧಿಸುತ್ತಾರೆ. ದ್ವಿತೀಯ ಅಯೋಧ್ಯೆಯಲ್ಲಿ ಮಹಾರಾಸಲೀಲೆಗಳು ಸಂಘಟಿತಗೊಳ್ಳುವವು , ಇದರಲ್ಲಿ ಗೋಪ, ಗೋಪಾಲ (ದೇವತೆಗಳು) ಅಂದರೆ ಭಕ್ತ ಮತ್ತು ದೇವರ ನಡುವೆ ಭವ್ಯವಾದ ರಾಸಲೀಲೆಯನ್ನು ಆಯೋಜಿಸಲಾಗುತ್ತದೆ. ನಿಸ್ವಾರ್ಥ ಭಕ್ತರಾದ, ಪರಿಶುದ್ಧರಾದ ಭಕ್ತರು ಮಾತ್ರ ಭಗವಂತನ ಆ ಅದ್ಭುತವಾದ ದಿವ್ಯ ಮಹಾರಸ ಲೀಲೆಯಲ್ಲಿ ಅಂದರೆ ಭಕ್ತ ಮತ್ತು ಭಗವಂತನ ಮಿಲನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಸದ್ಯ ಭಕ್ತರನ್ನು ಒಟ್ಟುಗೂಡಿಸುವ ಕಾರ್ಯ ನಡೆಯುತ್ತಿದೆ.
“ಜೈ ಜಗನ್ನಾಥ”