ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು…
ಮಾನವ ಶರೀರದಲ್ಲಿ ಭಗವಂತನ ಆಗಮನದ ಬಗ್ಗೆ ಎಲ್ಲರಿಗೂ ಜ್ಞಾನವಿರುವುದಿಲ್ಲ. ಅಂದರೆ ಕೇವಲ ಕಲಿಯುಗದ ಅಂತ್ಯದಲ್ಲಿ ಭವಿಷ್ಯ ಮಾಲಿಕಾ ಗ್ರಂಥದಲ್ಲಿ ನಂಬಿಕೆ ಮತ್ತು ಭವಿಷ್ಯ ಮಾಲಿಕಾವನ್ನು ಅನುಸರಿಸುವವರು ಮಾತ್ರ ತಿಳಿದುಕೊಳ್ಳುತ್ತಾರೆ ದೇವರ ಭಕ್ತರಾಗುತ್ತಾರೆ.
ಅಚ್ಯುತಾನಂದರು ಮಾಲಿಕದಲ್ಲಿ ಹೀಗೆ ಬರೆಯುತ್ತಾರೆ…
“ಕೃಷ್ಣ ಭಾಬರಸ ನೋಹೆ ವೇದಾಭ್ಯಾಸ್ ಪೂರ್ವ ಜಾರ್ ಭಾಗ್ಯ ಥಿಬಾ.”
ಅರ್ಥ –
ವೇದಾಭ್ಯಾಸ ಮಾಡಿದವರಿಗೂ, ಮಹಾಪುರುಷರಿಗೂ, ಸನ್ಯಾಸರಿಗೂ ಪೀಠಾಧೀಶರಿಗೂ ದೇವರ ದರ್ಶನ ಸಿಗುವುದು ಸುಲಭವಲ್ಲ. ಆದರೆ ಪೂರ್ವದಲ್ಲಿ ಭಗವಂತನ ಭಕ್ತರಾಗಿದ್ದು ಅವರ ಹೃದಯದಲ್ಲಿ ಕೃಷ್ಣ ಸುಧೆಯು ತುಂಬಿರುತ್ತದೆಯೋ ಅಂತಹ ಮಾನವರಿಗೆ ಮಾತ್ರ ಶ್ರೀ ಭಗವಂತನ ದರ್ಶನ ಸಿಗುತ್ತದೆ.
ಅಚ್ಯುತಾನಂದರು ತಮ್ಮ ಮಾಲಿಕಾದಲ್ಲಿ ಬರೆಯುತ್ತಾರೆ…
ಯಾರು ತಮ್ಮನ್ನು ವೇದ ಶಾಸ್ತ್ರ ಅಥವಾ ಅಷ್ಟಾದಶ ಪುರಾಣಗಳನ್ನು ಬಲ್ಲವರೆಂದು ಭಾವಿಸುತ್ತಾರೋ ಮತ್ತು ತಮ್ಮನ್ನು ತಾವು ವಿದ್ವಾಂಸರೆಂದು ಪರಿಗಣಿಸಿ ಲಕ್ಷಗಟ್ಟಲೆ ಶಿಷ್ಯರನ್ನು ಮಾಡಿಕೊಳ್ಳುತ್ತಾರೋ ಅವರಿಗೂ ಶ್ರೀ ಭಗವಂತನ ದರ್ಶನ ಸಿಗುವುದಿಲ್ಲ. ಇದನ್ನು ಮಹಾಪುರುಷ ಅಚ್ಯುತಾನಂದರು ತಮ್ಮ ಭವಿಷ್ಯ ಮಾಲಿಕಾ ಪುಸ್ತಕದಲ್ಲಿ ದೃಢಪಡಿಸಿದ್ದಾರೆ. ಯಾವ ಭಕ್ತರು ತಮ್ಮ ಹಿಂದಿನ ಜನ್ಮದ ಸಂಸ್ಕಾರಗಳಿಂದ ಕೂಡಿ ಭಗವಂತನ ಭಕ್ತರಾಗಿದ್ದರೋ ಅವರಿಗೆ ಮಾತ್ರ ಭಗವಾನ್ ಶ್ರೀ ಕಲ್ಕಿದೇವ ಪ್ರಭುವಿನ ದರ್ಶನ ಸಿಗುತ್ತದೆ.
ಸತ್ಯಯುಗದಲ್ಲಿ ಯತಿ (ಋಷಿ ಮುನಿ), ತ್ರೇತಾಯುಗದಲ್ಲಿ ಕಪಿ (ಮಂಗ ಕರಡಿ), ದ್ವಾಪರಯುಗದ (ಯದುವಂಶಿ) ಗೋಪ್–ಗೋಪಿ ಮತ್ತು ಈಗಿನ ಕಲಿಯುಗದಲ್ಲಿರುವ ಭಕ್ತರು, ಈ ನಾಲ್ಕು ಯುಗಗಳ ಭಕ್ತರು ವಾಸ್ತವವಾಗಿ ಒಂದೇ. ಭೂಲೋಕದಲ್ಲಿ ಭಗವಂತನೊಡನೆ ಪುನಃ ಪುನಃ ಬರುವ ಈ ನಾಲ್ಕು ಯುಗದ ಭಕ್ತರು, ಪ್ರಸ್ತುತ ಶಾಸ್ತ್ರಗಳ ಜ್ಞಾನವಿರಲಿ ಇಲ್ಲದಿರಲಿ, ಆಗಲೂ ಅದೇ ಭಕ್ತರು ದೇವರೊಂದಿಗೆ ಸತ್ಯಯುಗಕ್ಕೆ ಹೋಗುತ್ತಾರೆ, ಏಕೆಂದರೆ ಯತಿಗಳು, ಕಪಿಗಳು, ಗೋಪಿಯರು. ಮತ್ತು ಹಿಂದಿನ ಭಕ್ತರು ದೇವರ ಆಶ್ರಯದಲ್ಲಿರುತ್ತಾರೆ.
ತಾರೋ ತಾಕೋ ಮಾಯಾ ಝಕಿ ಯಹಾ ಮಾಯಾ, ತಾರೋ ತಾಕೋ ಕಾಯಾ ಝಕಿ ಯಹಾ ಮಾಯಾ, ನಿಶ್ಚಯ ವಾಸನಾ ವಾಸಿಬ್.
ಅರ್ಥ –
ಪೂರ್ವದಲ್ಲಿ ತಪಿ–ಯತಿ, ಕಪಿ (ವಾನರ ಕರಡಿ) ಮತ್ತು ಗೋಪಿಯರು ಮಾತ್ರ ಮಾಲಿಕಾದ ಸತ್ಯತೆಯ ಬಗ್ಗೆ ತಿಳಿಯುತ್ತಾರೆ, ಅಂದರೆ ಅವರು ಭಕ್ತಿಯ ಸಂದೇಶವನ್ನು ಸ್ವೀಕರಿಸುತ್ತಾರೆ ಮತ್ತು ದೇವರಿಗೆ ಸಂಪೂರ್ಣ ಶರಣಾಗುತ್ತಾರೆ. ಆ ಜನರು ಮಾತ್ರ ಭಗವಾನ್ ಕಲ್ಕಿದೇವನಲ್ಲಿ ಆಶ್ರಯದಲ್ಲಿ ಬರುತ್ತಾರೆ. ಭಾರತದಲ್ಲಿ ಮಹಾನ್ ಋಷಿಗಳು ಮತ್ತು ಸಂತರು ಇರುತ್ತಾರೆ, ಆದರೆ ಅವರು ಭಗವಾನ್ ಕಲ್ಕಿಯನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ತಮ್ಮ ಬಗ್ಗೆ ಇರುವ ಗರ್ವ, ಲಕ್ಷಗಟ್ಟಲೆ ಭಕ್ತರಿದ್ದಾರೆಂಬ ಅಹಂಕಾರದಿಂದ ದೇವರನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಬಡವರೂ, ಮನಸ್ಸು ನಿರ್ಮಲವೂ, ನಿರ್ಮಲ ಭಕ್ತಿಯೂ ಇರುವವರು, ಅಹಂಕಾರವಿಲ್ಲದವರು, ಬೂಟಾಟಿಕೆಯನ್ನು ತಿಳಿಯದವರು ಮಾತ್ರ ಪರಮಾತ್ಮನನ್ನು ಪಡೆಯುತ್ತಾರೆ. ಮಾಲಿಕಾದ ಸಂದೇಶವು ಯಾರಿಗೆ ತಲುಪುತ್ತದೆಯೋ ಅದು ಯಾವುದೇ ಮಾಧ್ಯಮದ ಮೂಲಕ ತಲುಪಲಿ ಅವರೆಲ್ಲ ಭಾಗ್ಯವಂತರು.
“ಜೈ ಜಗನ್ನಾಥ”