ಮಹಾನ್ ವ್ಯಕ್ತಿ ಶ್ರೀ ಅಚ್ಯುತಾನಂದ ದಾಸ್ ರು ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು–
“ಭಗತ್ ಸುಮೇಲ್ ಹೋಈಬೇ ಕಾಟೂರ್
ಖಂಡಗಿರಿ ಪಾಸೆ ಜಿಬೆ.
ಅನಂತ ಮೂರ್ತಿ ದರ್ಶನ್ ಕರಿನ್
ಸರ್ವೇ ಸರ್ವಾಂಕು ಚಿನಿಭೇ ।”
ಅರ್ಥ –
ಒಡಿಶಾ ರಾಜ್ಯದ ಲಿಂಗರಾಜ ಎಂಬ (ಏಕಾಮ್ರ ಕ್ಷೇತ್ರ) ಪುಣ್ಯಭೂಮಿಯಲ್ಲಿ, ಖಂಡಗಿರಿ ಎಂದು ಕರೆಯಲ್ಪಡುವ ಪರ್ವತದ ಬಳಿ, ಭಕ್ತರು ಭಗವಾನ್ ಕಲ್ಕಿದೇವನ ಮುಂದೆ ಏಕತ್ರಿಕರಣಗೊಳ್ಳುವರು. ಆ ಸಮಯವು ಶೀಘ್ರದಲ್ಲೇ ಬರಲಿದೆ. ಇವರೆಲ್ಲರೂ ಮಹಾಪ್ರಭು ಅನಂತ ಕಿಶೋರ ಅಂದರೆ ಕಲ್ಕಿ ಭಗವಂತನ ದಿವ್ಯ ದರ್ಶನವನ್ನು ಪಡೆಯುತ್ತಾರೆ ಮತ್ತು ಎಲ್ಲಾ ಭಕ್ತರ ನಡುವೆ ಅದ್ಭುತವಾದ ಏಕತ್ರಿಕರಣ ಸೃಷ್ಟಿಯಾಗುವುದು. ದೇಶ–ವಿದೇಶಗಳ ಎಲ್ಲ ಭಕ್ತರು ಸಹ ತಮ್ಮ ನಡುವೆ ಸಂವಾದ ನಡೆಸಿ, ಭಗವಂತನ ಅನುಭವಗಳನ್ನು, ಲೀಲೆಗಳನ್ನು ಚರ್ಚಿಸುವರು. ಆ ಕ್ಷಣವು ತುಂಬಾ ಆಹ್ಲಾದಕರ, ಆನಂದದಾಯಕ ಮತ್ತು ಆಶ್ಚರ್ಯಕರವಾಗಿರುತ್ತದೆ. ಎಲ್ಲರೂ ಸಂತೋಷದಲ್ಲಿ ಮುಳುಗುವರು.
“ಜೈ ಜಗನ್ನಾಥ”