ಮಹಾಪುರುಷ ಶ್ರೀ ಅಚ್ಯುತಾನಂದ ದಾಸರು  ರಚಿಸಿದ ಭವಿಷ್ಯ ಮಾಲಿಕದ ಅಪರೂಪದ ಸಾಲುಗಳು ಮತ್ತು ಸಂಗತಿಗಳು-  

“ಭೂಮಿಕಂಫೆ ಪ್ರಕಂಪಿತ್ ಹೊಇಬೇ ಧರಣಿ, 

ಪಹಾಡ್ ಝಂಗಲ್ ಸಬ್ ಮಟಿರೆ ಮಿಸಿಬ್, 

ಬಿಚಿತ್ರ ಪಾರಿಬಾರ್ಥನ ಪ್ರತಿಬೀರೆ  ಹೆಬ್.”

ಅರ್ಥ:-

ಮುಂದಿನ ದಿನಗಳಲ್ಲಿ ತೀವ್ರ ಘರ್ಜನೆಯೊಂದಿಗೆ ಭೂಮಿಯ ಮೇಲೆ ಆಗಾಗ್ಗೆ ಭೂಕಂಪಗಳು ಸಂಭವಿಸುತ್ತವೆ. ಎಲ್ಲಾ ದೊಡ್ಡ-ದೊಡ್ಡ ಕಟ್ಟಡಗಳು ಕುಸಿಯುತ್ತವೆ. ಎಲ್ಲರೂ ಮಣ್ಣಿನಡಿಯಲ್ಲಿ ಹೂತುಹೋಗುತ್ತಾರೆ, ಎಲ್ಲಾ ಪರ್ವತಗಳು ಮತ್ತು ಕಾಡುಗಳು ಮಣ್ಣಿನಲ್ಲಿ ಬೆರೆತು ಹೋಗುತ್ತವೆ. ಆಚ್ಚರ್ಯಜನಕವಾದ ಪರಿವರ್ತನೆಗಳು   ಸಂಭವಿಸುತ್ತವೆ. ಯಾವುದೂ ಹಿಂದಿನ ರೀತಿಯಲ್ಲಿ ಇರುವುದಿಲ್ಲ ಈ ವಿನಾಶಕಾರಿ ಭೂಕಂಪದ ನಂತರ, ಸೂರ್ಯ ದೇವರು ಪಶ್ಚಿಮದಲ್ಲಿ ಉದಯಿಸುತ್ತಾನೆ ಮತ್ತು ಪೂರ್ವದಲ್ಲಿ ಅಸ್ತಮಿಸುತ್ತಾನೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಬದಲಾವಣೆಗಳನ್ನು ಜನರು ನೋಡಬಹುದು.

 "ಜೈ ಜಗನ್ನಾಥ"