ಮಹಾನ್ ವ್ಯಕ್ತಿ ಅಚ್ಯುತಾನಂದ ದಾಸರು  ಬರೆದ ಮಾಲಿಕಾದ ಕೆಲವು ಅಪರೂಪದ ಸಾಲುಗಳು ಮತ್ತು ಸಂಗತಿಗಳು-

“ಶೇಷ ಕಲಿ ಲೀಲಾ ಭಾವ ಬಝಾಈ  

 ಕಹಿಬಿ ತೋ ಆಗೇ ಸರ್ವ್ ರಾಮ್ ಚಂದ್ರರೇ

ಕಲ್ಕಿ ರೂಪ ಹೋಯಿಬೆ ಮಾಧವ ರಾಮ ಚಂದ್ರ ರೇ."

ಅರ್ಥ  -

ಮಹಾಪುರುಷ ಅಚ್ಯುತಾನಂದದಾಸರು  ತಮ್ಮ ಶಿಷ್ಯ ರಾಮದಾಸ್ ಅವರಿಗೆ ಕಲಿಯುಗದ ಕೊನೆಯಲ್ಲಿ ಭಗವಾನ್ ಕಲ್ಕಿಯು ಮಾನವ ಶರೀರದಲ್ಲಿ  ಅವತರಿಸಿದಾಗ ಅವರ ಹೆಸರು ಮಾಧವ ಎಂದು ಇರುವುದು. ಸಮಸ್ತ ಬ್ರಹ್ಮಾಂಡದ ಒಡೆಯನಾದ, ಶಿವ ಮತ್ತು ಬ್ರಹ್ಮನಿಗೂ ಸಾಧ್ಯವಾಗದ ದರ್ಶನ ಕೇವಲ  ಭಗವಂತನ ಕೃಪೆಗೆ ಪಾತ್ರರಾದವರು ಅಂದರೆ ಭಕ್ತರು ಮಾತ್ರ ಭಗವಂತನನ್ನು ತಿಳಿದುಕೊಳ್ಳುತ್ತಾರೆ.

ಈ ಕುರಿತು ಮಹಾಪುರುಷ ಅಚ್ಯುತಾನಂದರು ಮತ್ತೊಮ್ಮೆ ಹೀಗೆ ಬರೆದಿದ್ದಾರೆ...

“ಚೋರ್ ಪ್ರಾಯ ಆಂಭೇ ಅಬನೀ  ಭ್ರಮಿಬು ಚೆತಾ ಕರೈಬಾ ಪಾಯೇ,

ಚಾಹಿ ಜಕ್-ಜಕ್ ನಿಂದುಥಿಬೇ ಲೋಕ ಏಹಿ ಪರಾ  ಪ್ರಭು ಸೇಹಿ.”

ಅರ್ಥ  -

ನಾನು ಭೂಲೋಕಕ್ಕೆ ಬಂದು ಇಡೀ ಭೂಮಿಯನ್ನು ಕಳ್ಳನಂತೆ ಸುತ್ತುತ್ತೇನೆ ಹೇಗೆಂದರೆ ದ್ವಾಪರಯುಗದಲ್ಲಿ ಮಾಡಿದ ಹಾಗೆ.  ಆದರೆ ಕಲಿಯುಗದ ಪಾಪಿಗಳು ನನ್ನನ್ನು ನೋಡಿದ ನಂತರವೂ ಅನುಮಾನಿಸುತ್ತಾರೆ, ನನ್ನನ್ನು ಗುರುತಿಸುವುದಿಲ್ಲ. ಏನು ಇವನೆ ಭಗವಂತ?ಎಂದು ನಿಂದಿಸುತ್ತಾರೆ.

ಮಹಾಪುರುಷ ಅಚ್ಯುತಾನಂದರು ಮತ್ತೊಮ್ಮೆ ಕಲ್ಕಿ ಅವತಾರದ ಬಗ್ಗೆ ಹೀಗೆ ಬರೆಯುತ್ತಾರೆ...

“ರತ್ನಾವಟ ಚೂಡಾ ಭಂಗಿ ಹೆಬ್ ಕುಢ್ ಗುಪ್ತಾ ಖಂಡಗಿರಿ ತಿರೆ,

ಅನಂತ್ ಮಾಧವ ಉದಯ್ ಹೊಇಬೇ ಏಕಮ್ರ ಬನ  ಅಂತರೆ."

ಅರ್ಥ  -

ಪಾರಾದ್ವೀಪದ ಬಳಿ ಒಂದು ರತ್ನಾವಟ ಇದೆ. ಅದರ ಮೇಲ್ಭಾಗವು ಖಂಡಗಿರಿಯ ಬಳಿ ಬಂದು ಮುರಿದು ಬೀಳುತ್ತದೆ. ನಂತರ ಭಗವಂತ ಅನಂತ ಮಾಧವ ತಮ್ಮ ಲೀಲೆಗಳನ್ನು ಏಕಾಮ್ರ ವನದಲ್ಲಿ ಅಂದರೆ ಭುವನೇಶ್ವರದಲ್ಲಿ ವಿಸ್ತರಿಸುತ್ತಾರೆ.

ಮಹಾಪುರುಷರು ಮತ್ತೆ ಹೀಗೆ ಬರೆಯುತ್ತಾರೆ ...

“ಲೀಲಾ ಪ್ರಕಾಶಿಬ್, ಲೀಲಾಮಯಂಕರ್ ಸತ್ಯ ಜೆ ಏಕಮ್ರ್ ಬನ್,

ಲೀಲಾ ಕರುತಿಬೇ ಅನಂತ ಮಾಧವ ಸರ್ವೇ ಆನಂದ ಹೋಇಣ.”

ಅರ್ಥ  -

ಪ್ರಭು ಅನಂತ ಮಾಧವ ಹೆಸರಿನಿಂದ ಏಕಾಮ್ರ ವನ ಭುವನೇಶ್ವರಿಯಲ್ಲಿ ತಂಗಿದ್ದು, ಧರ್ಮ ಸಂಸ್ಥಾಪನಾ ಕಾರ್ಯವನ್ನು ಮುನ್ನಡೆಸಲಿದ್ದಾರೆ. ಪ್ರಭುರವರ ಬಗ್ಗೆ ವಿವರವಾಗಿ ಬರೆದಿರುವಷ್ಟು ಸರಿಯಾಗಿ ಹೇಳುವುದು ಕಷ್ಟವಾದರೂ ನಿಮ್ಮಂತಹ ಪುಣ್ಯಾತ್ಮರಿಗೆ ಸತ್ಯವನ್ನು ತಿಳಿಸುವುದು ನಮ್ಮ ಕರ್ತವ್ಯವೆಂದು ಪರಿಗಣಿಸಿ, ತಪ್ಪುದಾರಿಗೆಳೆಯುವ ಜನರಿಂದ ಎಚ್ಚರದಿಂದಿರಲು  ನಾವು ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇವೆ.  ಸತ್ಯವನ್ನು ಎಷ್ಟು ಬಾರಿ  ಹೇಳಿದರೂ ಅದು ಸುಳ್ಳಾಗುವುದಿಲ್ಲ.ಅದೇ ರೀತಿಯಲ್ಲಿ, ನಾವು ನಮ್ಮ ನಂಬಿಕೆಯಲ್ಲಿ ದೃಢವಾಗಿ ಉಳಿಯಬೇಕು ಮತ್ತು ಭಗವಾನ್ ಕಲ್ಕಿ ರಾಮರ  ಸಂಪೂರ್ಣ ಸಂಹಾರದ ಅವಧಿಯಲ್ಲಿ ಭವಿಷ್ಯದಲ್ಲಿ ಬರಲಿರುವ ಮಹಾ ವಿನಾಶಕಾರಿ ಲೀಲೆಯಿಂದ ಪಾರಾಗಲು ಪ್ರಯತ್ನಿಸಬೇಕು.

“ಆಊ ಬೆಸಿ ಬೆಲ್ ನಹಿ ಲೋ ಬೌಲ್, ನಿಕಟ  ಹೋಯಿಬ್ ದೇಖಾ,

ಪಂಚಸಖ ಮಾನೇ ಕಹಿ ಜೈಚ್ಛಂತಿ ಪುರಾಣ ಹೋಇಚಿ ಲೇಖಾ ॥"

ಅರ್ಥ -                                                                                                                                                                                       ಪಂಚಸಕರು ಮಾಲಿಕೆಯಲ್ಲಿ ಬರೆದಿದ್ದಾರೆ,  ಈಗ ಹೆಚ್ಚು ಸಮಯ ಉಳಿದಿಲ್ಲ. ಪ್ರಭು ಕಲ್ಕಿಯ ರೂಪವನ್ನು ಧರಿಸಿ, ಅಸುರರನ್ನು ನಾಶಪಡಿಸಿ ಮತ್ತು ಭಕ್ತರಿಗೆ ನಿರ್ಭಯತೆಯನ್ನು ಒದಗಿಸುವರು. ಪ್ರಭುಜಿಯನ್ನು ಅರಿಯದೆ, ತಿಳುವಳಿಕೆಯಿಲ್ಲದೆ ಅಗೌರವ ತೋರುತ್ತಿರುವವರಿಗೆ ಆ ಮಹಾನುಭಾವರು ಬರೆದಿದ್ದನ್ನೇ ಹೇಳುತ್ತೇವೆ...

“ ಟಣ ಪಣ  ಕರಿ ರಾಹಿತಿಬೆ ಜೆಉಣ ಜನ,

ಟಲ್ಮಲ್ ಸೇಹು ಹೋಯಿಬೆ ಕಲಂಕಿ ನಿಕಟಣ.”

ಅರ್ಥ  -

ಪ್ರಭುವಿನ  ಅಸ್ತಿತ್ವವನ್ನು ಪ್ರಶ್ನಿಸುವವರು ಮತ್ತು ಅಹಂಕಾರ,  ಅಥವಾ ಯಾವುದೇ ವೈಯಕ್ತಿಕ ದ್ವೇಷದಿಂದ ಭಕ್ತರನ್ನು ನಿಂದಿಸುವವರನ್ನು  ಪ್ರಭು ಮುಂದೆ ಉತ್ತರಿಸಬೇಕಾಗುತ್ತದೆ

"ಜೈ ಜಗನ್ನಾಥ"